Posts

ಅನಂತ

 ಜಗವ ಸುತ್ತಿದೊಡೆ  ಲೋಕದ ಜ್ಞಾನ ಅರಿತವರುಂಟೆ!! ಕಡಲಾಚೆ ದಾಟಿದೊಡೆ  ಕಡಲಾಳವ ಅರಿತವರುಂಟೆ !! ಬಾನಂಗಳದಲಿ ತೇಲಿದೊಡೆ  ಭೂಗರ್ಭವ ಅರಿತವರುಂಟೆ !! ಬದುಕು ದೂಡಿದೊಡೆ  ಜೀವತ್ವ ಅರಿತವರುಂಟೆ !! ಆತ್ಮವು ಕಳಚಿದೊಡೆ  ಮನಸಿನಾಳವ ಅರಿತವರುಂಟೆ !! ಅನಂತತೆಯ ಭಾವದೊಡೆ  ಅರಿಯಲಾಗದು ಏನನ್ನು , ಕೊನೆಯೇ ಇಲ್ಲದ ಕೊನೆಯನ್ನು!! -- ಚಂಕೆ

ಕಾಣದ ದೇಶದೊಳು

 ಕನಸುಗಳು ನೂರೆಂಟು ನಾ ಹೊರಟೆ ಅದನುಡಿಕಿ ಕಾಣದ ದೇಶದೊಳು ನನ್ನಲ್ಲೇ ನಾ ಮರೆತು ! ಗಗನ ಚುಂಬಿ ಕಟ್ಟಡಗಳ ನೋಡಿ  ನಿಂತೇ ಅದರ ಸೊಬಗಿಗೆ ನನ್ನನ್ನೇ ನಾ ಕಂಡು ! ಸೋತೆ ನಾ ಅದರ ಆಕರ್ಷಣೆಯಲಿ  ದುಡಿವ ಮತ್ತಿನಲ್ಲಿ ಮರೆತೇ ನನ್ನವರ ! ಕಳೆಯಿತು ಸಮಯ ಎಚ್ಚರವಾಗುವದೊರಳಗೆ ತಲುಪಿದೆ ಯೌವನದ ಶಿಖರದೆತ್ತರಕೆ ! ಕರೆಯಿತು ನನ್ನಯ ಮಣ್ಣು ಬಾ ಎಂದು  ಕಳಚಿತು ಆತ್ಮ ನಾ ತಲುಪುವದರೊಳಗೆ ! -- ಚಂಕೆ

ಬದುಕು

ತಾನರಿಯದೆ ಇನ್ನೊಬ್ಬರನು ಅರಿಯಲಾರ  ಜೀವನದೊಪ್ಪಿಗೆವಿಲ್ಲದೆ ಬದುಕು ನಡೆಸಲಾರ !! ಬದುಕಿನ ಅಲೆಗಳಿಗೆ ತಡೆಯೊಡ್ಡಲಾರ ಅವನಾಟಕೆ ಎಂದಿಗೂ ತಪ್ಪಿಸಿಕೊಳ್ಳಲಾರ !!  ಬರುವ ಕಷ್ಟಗಳಿಗೆ ಕೊಡುವನು ಪರಿಹಾರ  ಕಾದು ಬಾಳಿದರೆ ಆಗುವುದು ಜೀವನ ಸಾಕಾರ !!

ಮೋಕ್ಷ

ದಿನಾ ಕುಡಿಯುವ ಕುಡುಕನಲ್ಲ ಬಯಸಿದಾಗ ಕುಡಿಯುವ ಕುಡುಕ !! ಇಂತದ್ದೇ ಬೇಕೆನ್ನುವ ಕುಡುಕನಲ್ಲ ಒಳ್ಳೆಯ ಸಾಂಗತ್ಯ ಬಯಸುವ ಕುಡುಕ!! ಮಿತಿ ಮೀರಿ ಕುಡಿಯುವ ಕುಡುಕನಲ್ಲ ಅಂಕೆಯ ಅರಿತು ಕುಡಿಯುವ ಕುಡುಕ!! ಅನ್ಯರ ಅರಿಯಲು ಕುಡಿಯುವ ಕುಡುಕನಲ್ಲ ತನ್ನ ಅಂತರಂಗ ಬಹಿರಂಗವನರಿಯಲು ಕುಡಿಯುವ ಕುಡುಕ!! ಪ್ರಾಪಂಚಿಕ ಜ್ಞಾನವನರಿಯಲು ಕುಡಿಯುವ ಕುಡುಕನಲ್ಲ ಕುಡಿದ ನಶೆಯಲಿ ಸಮಾಧಿಯನ್ನುಡುಕುವ ಕುಡುಕ !!! -- ಚಂಕೆ

ಹುಣ್ಣಿಮೆಯ ರಾತ್ರಿಯಲಿ

ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳ ಬೆಳಕಿನಲಿ ನಮ್ಮಿಬ್ಬರ ಮಿಲನದಲಿ ನಾಚಿ ನೀರಾದನೆ ಆ ಚಂದ್ರ !! ತನು ಮನ ಬೆರೆತು ಒಂದಾದ ಶಾರೀರ ನೋಡಿ ಅಸೂಯೆನೇನಾದರೂ ಪಟ್ಟನೆ ಆ ಚಂದ್ರ !!! ಮೈ ಮರೆತು ಒಂದಾದ ಎರಡು ಜೀವಗಳ ನೋಡಿ ದ್ವೇಷದಲಿ ಮೋಡಗಳ ನಡುವೆ ಅವಿತು ಕುಳಿತನೇ ಆ ಚಂದ್ರ !! ಕಾಮದ ಉತ್ತುಂಗದಲಿರುವ ನಗ್ನ ಜೋಡಿಯ ಕಂಡು ಮತ್ಸರದ ಛಾಯೆಯಲಿ ಬೆಂದು ಹೋದನೆ ಆ ಚಂದ್ರ !! ಬೇಡವೇ ಬೇಡ ಈ ಬೆಳದಿಂಗಳ ಬೆಳಕು ಈ ಪ್ರೇಮಿಗಳಿಗೆ ಇದೇ ಕಾರಣೆಕೇನು ಅಮಾವಾಸ್ಯೆ ತರುವುದು ಆ ಚಂದ್ರ !! -- ಚಂಕೆ

ಹಕ್ಕಿ

ಹಾರುತಿದೆ ಹಕ್ಕಿಯು ಹಾರುತಿದೆ ಚಿಟಪಟ ಸದ್ದನು ಮಾಡುತ ಹಕ್ಕಿಯು ಬಾನಂಗಳದಲಿ ತೇಲುತಿದೆ!!! ಏನನು ಬಯಸದ ಏನನು ಕೇಳದ ಸ್ವಚ್ಛಂದದಲಿ ಹಾರುತ ಹಕ್ಕಿಯು ನೀಲಾಕಾಶದಲಿ ತೇಲುತಿದೆ !! ಅಪಾಯವನರಿಯದೆ ಹಾರುತ ಹಕ್ಕಿಯು ಕವಿದ ಮೋಡಗಳ ನಡುವೆ ಬಾನಂಗಳದಲ್ಲಿ ತೇಲುತಿದೆ !! ಗಿಡುಗನ ಕಣ್ಣಿಗೆ ಬಿದ್ದ ಹಕ್ಕಿಯು ಬಯಸದೆ ಬಂದಭಾಗ್ಯವ ಕಂಡು ಮೇಲಾರುತಿದೆ ಮೇಲಾರುತಿದೆ!! ಗಿಡುಗನ ಕೊಕ್ಕಿಗೆ ಸಿಕ್ಕಾ ಹಕ್ಕಿಯು ಸುಂದರ ನೆನಪಿನ ಕ್ಷಣಗಳ ನೆನೆದು ಸಾವನನೊಪ್ಪಿ ಜೀವವ ತೊರೆದು ಮಣ್ಣಲಿ  ಮಣ್ಣ ಸೇರುತಿದೆ!! --ಚಂಕೆ