ಅನಂತ
ಜಗವ ಸುತ್ತಿದೊಡೆ
ಲೋಕದ ಜ್ಞಾನ ಅರಿತವರುಂಟೆ!!
ಕಡಲಾಚೆ ದಾಟಿದೊಡೆ
ಕಡಲಾಳವ ಅರಿತವರುಂಟೆ !!
ಬಾನಂಗಳದಲಿ ತೇಲಿದೊಡೆ
ಭೂಗರ್ಭವ ಅರಿತವರುಂಟೆ !!
ಬದುಕು ದೂಡಿದೊಡೆ
ಜೀವತ್ವ ಅರಿತವರುಂಟೆ !!
ಆತ್ಮವು ಕಳಚಿದೊಡೆ
ಮನಸಿನಾಳವ ಅರಿತವರುಂಟೆ !!
ಅನಂತತೆಯ ಭಾವದೊಡೆ
ಅರಿಯಲಾಗದು ಏನನ್ನು , ಕೊನೆಯೇ ಇಲ್ಲದ ಕೊನೆಯನ್ನು!!
-- ಚಂಕೆ
Comments
Post a Comment