ಹುಣ್ಣಿಮೆಯ ರಾತ್ರಿಯಲಿ
ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳ ಬೆಳಕಿನಲಿ
ನಮ್ಮಿಬ್ಬರ ಮಿಲನದಲಿ ನಾಚಿ ನೀರಾದನೆ ಆ ಚಂದ್ರ !!
ತನು ಮನ ಬೆರೆತು ಒಂದಾದ ಶಾರೀರ
ನೋಡಿ
ಅಸೂಯೆನೇನಾದರೂ ಪಟ್ಟನೆ ಆ ಚಂದ್ರ !!!
ಮೈ ಮರೆತು ಒಂದಾದ ಎರಡು ಜೀವಗಳ ನೋಡಿ
ದ್ವೇಷದಲಿ ಮೋಡಗಳ ನಡುವೆ ಅವಿತು ಕುಳಿತನೇ ಆ ಚಂದ್ರ !!
ಕಾಮದ ಉತ್ತುಂಗದಲಿರುವ ನಗ್ನ ಜೋಡಿಯ ಕಂಡು
ಮತ್ಸರದ ಛಾಯೆಯಲಿ ಬೆಂದು ಹೋದನೆ ಆ ಚಂದ್ರ !!
ಬೇಡವೇ ಬೇಡ ಈ ಬೆಳದಿಂಗಳ ಬೆಳಕು ಈ ಪ್ರೇಮಿಗಳಿಗೆ
ಇದೇ ಕಾರಣೆಕೇನು ಅಮಾವಾಸ್ಯೆ ತರುವುದು ಆ ಚಂದ್ರ !!
-- ಚಂಕೆ
Comments
Post a Comment