ಕಾಣದ ದೇಶದೊಳು

 ಕನಸುಗಳು ನೂರೆಂಟು ನಾ ಹೊರಟೆ ಅದನುಡಿಕಿ

ಕಾಣದ ದೇಶದೊಳು ನನ್ನಲ್ಲೇ ನಾ ಮರೆತು !


ಗಗನ ಚುಂಬಿ ಕಟ್ಟಡಗಳ ನೋಡಿ 

ನಿಂತೇ ಅದರ ಸೊಬಗಿಗೆ ನನ್ನನ್ನೇ ನಾ ಕಂಡು !


ಸೋತೆ ನಾ ಅದರ ಆಕರ್ಷಣೆಯಲಿ 

ದುಡಿವ ಮತ್ತಿನಲ್ಲಿ ಮರೆತೇ ನನ್ನವರ !


ಕಳೆಯಿತು ಸಮಯ ಎಚ್ಚರವಾಗುವದೊರಳಗೆ

ತಲುಪಿದೆ ಯೌವನದ ಶಿಖರದೆತ್ತರಕೆ !


ಕರೆಯಿತು ನನ್ನಯ ಮಣ್ಣು ಬಾ ಎಂದು 

ಕಳಚಿತು ಆತ್ಮ ನಾ ತಲುಪುವದರೊಳಗೆ !


-- ಚಂಕೆ

Comments

Popular posts from this blog

ಹುಣ್ಣಿಮೆಯ ರಾತ್ರಿಯಲಿ

ಬದುಕು

ಹಕ್ಕಿ