ಹಕ್ಕಿ

ಹಾರುತಿದೆ ಹಕ್ಕಿಯು ಹಾರುತಿದೆ ಚಿಟಪಟ ಸದ್ದನು
ಮಾಡುತ ಹಕ್ಕಿಯು ಬಾನಂಗಳದಲಿ ತೇಲುತಿದೆ!!!

ಏನನು ಬಯಸದ ಏನನು ಕೇಳದ ಸ್ವಚ್ಛಂದದಲಿ
ಹಾರುತ ಹಕ್ಕಿಯು ನೀಲಾಕಾಶದಲಿ ತೇಲುತಿದೆ !!

ಅಪಾಯವನರಿಯದೆ ಹಾರುತ ಹಕ್ಕಿಯು
ಕವಿದ ಮೋಡಗಳ ನಡುವೆ ಬಾನಂಗಳದಲ್ಲಿ ತೇಲುತಿದೆ !!

ಗಿಡುಗನ ಕಣ್ಣಿಗೆ ಬಿದ್ದ ಹಕ್ಕಿಯು ಬಯಸದೆ ಬಂದಭಾಗ್ಯವ
ಕಂಡು ಮೇಲಾರುತಿದೆ ಮೇಲಾರುತಿದೆ!!

ಗಿಡುಗನ ಕೊಕ್ಕಿಗೆ ಸಿಕ್ಕಾ ಹಕ್ಕಿಯು ಸುಂದರ ನೆನಪಿನ ಕ್ಷಣಗಳ
ನೆನೆದು ಸಾವನನೊಪ್ಪಿ ಜೀವವ ತೊರೆದು ಮಣ್ಣಲಿ  ಮಣ್ಣ ಸೇರುತಿದೆ!!

--ಚಂಕೆ

Comments

Popular posts from this blog

ಹುಣ್ಣಿಮೆಯ ರಾತ್ರಿಯಲಿ

ಬದುಕು