ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳ ಬೆಳಕಿನಲಿ ನಮ್ಮಿಬ್ಬರ ಮಿಲನದಲಿ ನಾಚಿ ನೀರಾದನೆ ಆ ಚಂದ್ರ !! ತನು ಮನ ಬೆರೆತು ಒಂದಾದ ಶಾರೀರ ನೋಡಿ ಅಸೂಯೆನೇನಾದರೂ ಪಟ್ಟನೆ ಆ ಚಂದ್ರ !!! ಮೈ ಮರೆತು ಒಂದಾದ ಎರಡು ಜೀವಗಳ ನೋಡಿ ದ್ವೇಷದಲಿ ಮೋಡಗಳ ನಡುವೆ ಅವಿತು ಕುಳಿತನೇ ಆ ಚಂದ್ರ !! ಕಾಮದ ಉತ್ತುಂಗದಲಿರುವ ನಗ್ನ ಜೋಡಿಯ ಕಂಡು ಮತ್ಸರದ ಛಾಯೆಯಲಿ ಬೆಂದು ಹೋದನೆ ಆ ಚಂದ್ರ !! ಬೇಡವೇ ಬೇಡ ಈ ಬೆಳದಿಂಗಳ ಬೆಳಕು ಈ ಪ್ರೇಮಿಗಳಿಗೆ ಇದೇ ಕಾರಣೆಕೇನು ಅಮಾವಾಸ್ಯೆ ತರುವುದು ಆ ಚಂದ್ರ !! -- ಚಂಕೆ
ದಿನಾ ಕುಡಿಯುವ ಕುಡುಕನಲ್ಲ ಬಯಸಿದಾಗ ಕುಡಿಯುವ ಕುಡುಕ !! ಇಂತದ್ದೇ ಬೇಕೆನ್ನುವ ಕುಡುಕನಲ್ಲ ಒಳ್ಳೆಯ ಸಾಂಗತ್ಯ ಬಯಸುವ ಕುಡುಕ!! ಮಿತಿ ಮೀರಿ ಕುಡಿಯುವ ಕುಡುಕನಲ್ಲ ಅಂಕೆಯ ಅರಿತು ಕುಡಿಯುವ ಕುಡುಕ!! ಅನ್ಯರ ಅರಿಯಲು ಕುಡಿಯುವ ಕುಡುಕನಲ್ಲ ತನ್ನ ಅಂತರಂಗ ಬಹಿರಂಗವನರಿಯಲು ಕುಡಿಯುವ ಕುಡುಕ!! ಪ್ರಾಪಂಚಿಕ ಜ್ಞಾನವನರಿಯಲು ಕುಡಿಯುವ ಕುಡುಕನಲ್ಲ ಕುಡಿದ ನಶೆಯಲಿ ಸಮಾಧಿಯನ್ನುಡುಕುವ ಕುಡುಕ !!! -- ಚಂಕೆ
Comments
Post a Comment