Posts

Showing posts from August, 2025

ಅನಂತ

 ಜಗವ ಸುತ್ತಿದೊಡೆ  ಲೋಕದ ಜ್ಞಾನ ಅರಿತವರುಂಟೆ!! ಕಡಲಾಚೆ ದಾಟಿದೊಡೆ  ಕಡಲಾಳವ ಅರಿತವರುಂಟೆ !! ಬಾನಂಗಳದಲಿ ತೇಲಿದೊಡೆ  ಭೂಗರ್ಭವ ಅರಿತವರುಂಟೆ !! ಬದುಕು ದೂಡಿದೊಡೆ  ಜೀವತ್ವ ಅರಿತವರುಂಟೆ !! ಆತ್ಮವು ಕಳಚಿದೊಡೆ  ಮನಸಿನಾಳವ ಅರಿತವರುಂಟೆ !! ಅನಂತತೆಯ ಭಾವದೊಡೆ  ಅರಿಯಲಾಗದು ಏನನ್ನು , ಕೊನೆಯೇ ಇಲ್ಲದ ಕೊನೆಯನ್ನು!! -- ಚಂಕೆ

ಕಾಣದ ದೇಶದೊಳು

 ಕನಸುಗಳು ನೂರೆಂಟು ನಾ ಹೊರಟೆ ಅದನುಡಿಕಿ ಕಾಣದ ದೇಶದೊಳು ನನ್ನಲ್ಲೇ ನಾ ಮರೆತು ! ಗಗನ ಚುಂಬಿ ಕಟ್ಟಡಗಳ ನೋಡಿ  ನಿಂತೇ ಅದರ ಸೊಬಗಿಗೆ ನನ್ನನ್ನೇ ನಾ ಕಂಡು ! ಸೋತೆ ನಾ ಅದರ ಆಕರ್ಷಣೆಯಲಿ  ದುಡಿವ ಮತ್ತಿನಲ್ಲಿ ಮರೆತೇ ನನ್ನವರ ! ಕಳೆಯಿತು ಸಮಯ ಎಚ್ಚರವಾಗುವದೊರಳಗೆ ತಲುಪಿದೆ ಯೌವನದ ಶಿಖರದೆತ್ತರಕೆ ! ಕರೆಯಿತು ನನ್ನಯ ಮಣ್ಣು ಬಾ ಎಂದು  ಕಳಚಿತು ಆತ್ಮ ನಾ ತಲುಪುವದರೊಳಗೆ ! -- ಚಂಕೆ